ಪಕ್ಷಿ: ಕೆಮ್ಮೀಸೆ ಪಿಕಳಾರ
ಸಂಕ್ಷಿಪ್ತ ಮಾಹಿತಿ
ಇತರ ಹೆಸರುಗಳು | ಕೆಮ್ಮೀಸೆ ಪಿಕಳಾರ (Red whiskered bulbul), ಕೆಂಪು ಕಪೋಲದ ಪಿಕಳಾರ |
ದ್ವಿನಾಮ (Binomial name) | ಪಿಕ್ನೋನೋಟಸ್ ಜೊಕೋಸಸ್ (Pycnonotus Jocosus) |
ಆವಾಸ ಸ್ಥಾನ | ಕುರಚಲು-ಕಾಡು, ಸ್ವಲ್ಪ ಮರಗಳಿರುವ ಪ್ರದೇಶ, ತೋಪುಗಳು, ಉದ್ಯಾನವನಗಳು, ತೋಟಗಳು, ಜನವಸತಿ ಪ್ರದೇಶ |
ವ್ಯಾಪ್ತಿ | ಭಾರತ |
ಆಹಾರ ಕ್ರಮ | ಹಣ್ಣುಗಳು, ಹೂವಿನ ಮಕರಂದ, ಕೀಟಗಳು ಮತ್ತು ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳ ಹಣ್ಣುಗಳು. |
ಕೆಮ್ಮೀಸೆಯ ಪಿಕಳಾರ ಮಲೆನಾಡಿನ ಕಾಡುಗಳಲ್ಲಿ ಹಾಗೂ ಮನುಷ್ಯ ವಾಸ ಸ್ಥಾನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುವಬರುವ ಹಕ್ಕಿ. ಇದು ಗತ್ರದಲ್ಲಿ ಗುಬ್ಬಿಗಿಂತ ದೊಡ್ಡದಿದ್ದು, ಮೈನಾ ಹಕ್ಕಿಗಿಂತ ಚಿಕ್ಕದಿದ್ದು ಸುಮಾರು 20 ಸೆಂ.ಮೀ. ಇರುತ್ತದೆ.
ಕೆಮ್ಮೀಸೆಯ ಪಿಕಳಾರಗಳು ಗಲ್ಲದ ಬಳಿ ಆಕರ್ಷಕ ಕೆಂಪು ಬಣ್ಣದ ಸಣ್ಣ ಪುಕ್ಕಗಳನ್ನು ಹೊಂದಿದ್ದು, ತಲೆಯ ಮೇಲೆ ಕಪ್ಪು ಬಣ್ಣದ ಜುಟ್ಟನ್ನು ಹೊಂದಿರುತ್ತದೆ. ಬಿಳಿಯ ಎದೆ ಭಾಗ, ಕಂದು ಬಣ್ಣದ ಬೆನ್ನು ಹಾಗೂ ಬಾಲ ಹೊಂದಿರುತ್ತದೆ. ಬಾಲದ ಕೆಳ ಭಾಗದಲ್ಲಿ ಕೆಂಪನೆಯ ಸಣ್ಣ ಪುಕ್ಕಗಳನ್ನು ಹೊಂದಿರುತ್ತದೆ.
ಹೂದೋಟಗಳಲ್ಲಿ, ಉದ್ಯಾನವನಗಳಲ್ಲಿ ಮತ್ತು ತೋಟಗಳಲ್ಲಿ ಕಾಣಸಿಗುವ ಇವು ಬೆಳಗಿನ ಜಾವ ಮರದ ಅಥವಾ ಗಿಡದ ಟೊಂಗೆಯ ಮೇಲೆ ನಿಂತು ಸುಶ್ರಾವ್ಯವಾಗಿ ಸಿಳ್ಳೆ ಹೊಡಿಯುತ್ತಾ ಹಾಡುತ್ತವೆ.
ಸಾಮಾನ್ಯವಾಗಿ ಇವು ಜೋಡಿಯಾಗಿ ಅಥವಾ ಸಣ್ಣ ಗುಂಪುಗಳಾಗಿ ಕಾಣಸಿಗುತ್ತವೆ.
ಇವು ವರ್ಷದಲ್ಲಿ 2 ಬಾರಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಮೊಟ್ಟೆಯನ್ನು ಬಟ್ಟಲುಗಾತ್ರದ ಗೂಡಿನಲ್ಲಿ ತೆಳು ನಿಲಿ ಬಣ್ಣದ ಎರಡು ಅಥವಾ ಮೂರು ಮೊಟ್ಟೆಗಳನ್ನಿಡುತ್ತವೆ.
ವೈಜ್ಞಾನಿಕ ವರ್ಗೀಕರಣ (Scientific classification)
ಸಂಕುಲ (Kingdom) | ಅನಿಮೇಲಿಯಾ (Animalia) |
ವಂಶ (Phylum) | ಖೊರ್ಡಟ (Chordata) |
ವರ್ಗ (Class) | ಏವ್ಸ್ (Aves) |
ಗಣ (Order) | ಪೆಸ್ಸೆರಿಫಾರ್ಮ್ಸ್ (Passeriformes) |
ಕುಟುಂಬ (Family) | ಪಿಕ್ನೋನೋಟಿಡೆ (Pycnonotidae) |
ಜಾತಿ (Genus) | ಪಿಕ್ನೋನೋಟಸ್ (Pycnonotus) |
ಪ್ರಭೇದ (Species) | ಪಿಕ್ನೋನೋಟಸ್ ಜೊಕೋಸಸ್ (Pycnonotus Jocosus) |